Monday, 2 January 2012

Mandara

ಹಸಿರು ಗಿಡದ ತುಂಬ
ಕುಸುಮ ಮಂದಾರ
ಅರೆ ಬಿಚ್ಚಿದ ಬಿಳಿ ಚಿಟ್ಟೆಯ
ತೆರೆ ರೆಕ್ಕೆಯ ತರಹ

ಮುಗುಳು ಮಂದ್ರ ಮೌನ
ಪಕಳೆ ಮಧ್ಯೆ ಲಜ್ಜೆ
ತುಂಬಿ ತೆಕ್ಕೆಯ ತಾರ ತುಂಬುರ
ತೆರೆ ಬಿಂಬದ ತರಹ

ಹಿಮ ಹನಿದ ಕುಸುರಿ ನತ್ತು
ನೆಂದ ಕಡಲ ಚಿಪ್ಪು ಮುತ್ತು
ಕಾಮ ಕಾದಲನ ಕಾಂತೆ ಕಾಯದ
ತೆರೆ ಬಿಂಬದ ತರಹ

ಮಧು ಮಧುರ ಮಕರಂಧ
ಸೋನೆ ಮಳೆಯ ಮಣ್ಣ ಗಂಧ
ಬೆಳ್ಳಕ್ಕಿಯ ಬಿಳಿ ಪುಕ್ಕದ
ತೆರೆ ಗರಿಯ ತರಹ



No comments:

Post a Comment